Hit Counter

18 Mar 2010

Guest Post #4: ಅತಿ ಸಣ್ಣ ಕಥೆಗಳು (Shortest Stories)

ಅತಿಥಿ ವಾರಧ ನನ್ನ ಮೊದಲ ಕನ್ನಡ ಬ್ಲಾಗ್, ಗೆಳೆಯನೊಬ್ಬನು ಬರೆದಿರುವನು. ಅದನ್ನು ಇಲ್ಲಿ ಪ್ರಸ್ತುತ ಪಡಿಸಲು ನನಗೆ ಬಹಳ ಸಂತೋಷವಾಗುತ್ತಿದೆ. ಧನ್ಯವಾದಗಳು ಸುಶೀಲ್!

For the benefit of my English readers: This is my first guest blog in a local language (Kannada). I'm pleased to present it. Thanks Susheel!

Ernest Hemingway ಹೀಗೊಂದು ಕತೆ ಬರೀತಾರೆ. ಅದು ಕೇವಲ ಆರೇ ಪದಗಳಲ್ಲಿ! ಇದು ತನ್ನ ಅತ್ಯುತ್ತಮ ಕೃತಿಗಳಲ್ಲಿ ಒಂದು ಅಂತಾರೆ ಕೂಡಾ. 

"For sale: baby shoes, never worn."
"ಕುಲಾವಿಯೊಂದು ಮಾರಾಟಕ್ಕಿದೆ. ಎಂದೂ ಉಪಯೋಗಿಸಿಯೇ ಇಲ್ಲ!"

ಹಾಗೇ Augusto Monterroso  ತಮ್ಮ "El Dinosaurio" ("The Dinosaur") ಅನ್ನೋ ಅತಿಸಣ್ಣ ಕಾಲ್ಪನಿಕ (fiction) ಕತೆಯೊಂದನ್ನ ಬರೀತಾರೆ. 
ಇಡೀ ಕತೆ ಕೇವಲ ಎಂಟು ಪದಗಳನ್ನೊಳಗೊಂಡಿದ್ರೂ ಓದಿದ ಬಳಿಕ ಓದುಗನನ್ನ ಯೋಚನೆಗೆ ಹಚ್ಚೋದ್ರಲ್ಲಿ ಸೋಲುವುದಿಲ್ಲ.
Cuando despertó, el dinosaurio todavía estaba allí. 
("When [s]he awoke, the dinosaur was still there.") 
"ಅವನಿ(ಳಿ)ಗೆ ಎಚ್ಚರವಾದಾಗ, ಡೈನೋಸಾರ್ ಇನ್ನೂ ಅಲ್ಲೇ ಇತ್ತು."

ಇದೇ ತೆರನಾಗಿ Wired.comStory Bytes ಅನ್ನೋ ಕೆಲವು ವೆಬ್ಸೈಟುಗಳೂ ವಿವಿಧ ಲೇಖಕರಿಂದ ಅತಿಸಣ್ಣ ಕತೆ ಬರೆಸುವ ಪ್ರಯತ್ನ ಮಾಡಿ ಯಶಸ್ವಿಯಾಗಿದೆ. ಅದೇ ರೀತಿ ಆರ್ಕುಟ್ಟಿನಲ್ಲಿ ಕನ್ನಡ ಕವಿತೆ, ಕಥೆ - ವಿಭಾಗ ಅನ್ನೋ ಕಮ್ಯುನಿಟಿಯ ಸದಸ್ಯರೆಲ್ಲ ಸೇರಿ ಮಾಡಿದ ವಿಶೇಷ ಪ್ರಯತ್ನಗಳು ಕೂಡಾ ಒಂದು. ಫೆಬ್ರವರಿ 2008ರಿಂದ ಈಚೆಗೆ ಅಲ್ಲಿದ್ದ ನನ್ನ ಕೆಲವು ಪ್ರಯತ್ನಗಳನ್ನ ಕ್ರೋಢೀಕರಿಸಿ ಒಂದು ಬ್ಲಾಗ್ ಪೋಸ್ಟ್ ಮಾಡುವ ಇರಾದೆ ತುಂಬಾ ದಿನಗಳಿಂದಲೇ ಇತ್ತಾದ್ರೂ ಸದಾ ಕಾಡುವ/ಕೊಡುವ 'ಕೆಲಸದೊತ್ತಡ','ಟೈಮಿಲ್ಲ','ಬರ್ಯೋಕ್ ಸಾವ್ರ ಐಡಿಯಾಗಳಿವೆ ಆದ್ರೆ ಬರ್ಯಕ್ಕಾಗ್ತಿಲ್ಲ' ಅನ್ನೋ ಸುಳ್ಳು-ನೆಪಗಳಲ್ಲೇ ಮುಳುಗಿಹೋಗಿದ್ದೆ. ಆಗಿದ್ದಾಗ್ಲಿ ಅಂತ ಕೂತು ಎಲ್ಲವನ್ನೂ ಹೆಕ್ಕಿ ತಂದು ಒಂದುಮಾಡಿ ಇಲ್ಲಿರಿಸಿದ್ದೇನೆ.

೧. "ಮೇನಕೆಯ ಶುಭ್ರಶ್ವೇತ ವಸ್ತ್ರಗಳು ಇನ್ನೂ ಮರದಬುಡದಲ್ಲೇ ಬಿದ್ದಿತ್ತು" 

೨. ಒಣಗಿದ ಜಮೀನಿನ ಮಧ್ಯದಲ್ಲ್ಲಿಬಿದ್ದಿದ್ದ ಮುದುಕ ಮುದ್ದೇಗೌಡನ ಶವ ಆಗಸದೆಡೆಗೆ ಇನ್ನೂ ಆಸೆಯ ನೋಟ ಬೀರುತ್ತಲೇ ಇತ್ತು. 

೩. ವಿಪರ್ಯಾಸ : ರಾಜ್ಯ ಮಟ್ಟದ ಮ್ಯಾರಾಥಾನ್‍ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದವನಿಂದು ಉಪ್ಪಾರಪೇಟೆ ಪೋಲೀಸ್ ಸ್ಟೇಷನ್ನಿನ ಕ್ರೈಂ ಬ್ರಾಂಚಿನಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿದ್ದಾನೆ. 

೪. ಕೇಡುಗಾಲ : ಅವರೆಲ್ಲರೂ ಸಹಬಾಳ್ವೆ ನಡೆಸುತ್ತಾ ಸುಖವಾಗಿರುವಾಗಲೇ, ಗೂಗಲ್ ಆರ್ಕುಟ್ಟನ್ನು ಮಾರಿಬಿಡುವ ಹೊಂಚು ಹಾಕಿತು. 

೫. ಸುನಾಮಿ : ದಿನಾವೂ ಶಾಂತವಾಗಿ ಸಂಜೆ ಸೂರ್ಯನನ್ನು ನುಂಗುತ್ತಿದ್ದ ಕಡಲು ಇಂದೇಕೋ ರಚ್ಚೆ ಹಿಡಿದ ಮಗುವಿನಂತೆ ವಾಕರಿಸುತ್ತಿದೆ! 

೬. ಮೊದಲೇ ಲೇಟಾಗಿದೆ, ಅವಸರವಸರವಾಗಿ ಹಲ್ಲುಜ್ಜಿಕೊಂಡು ಸೊರ್ರನೆ ಕಾಫಿ ಹೀರಿದೆ; 
ಬೇಗ ಶೇವ್ ಮಾಡಿಬಿಡೋಣಾಂತ ಕೆನ್ನೆಗೆ ಬ್ರಶ್ ತಗುಲಿಸಿದಾಗ ಯಾಕೋ ಏನೋ ಕ್ಲೋಸಪ್ ವಾಸನೆ ಬರ್ತಿದೆ! 

೭. ಪದ-ಪದಗಳ ನಡುವೆ ನಾಮಪದಗಳ ತುರುಕಿ ಕ್ರಿಯಾಪದಗಳ ಸೇರಿಸಿ ಆಡುತ್ತಿದ್ದ ಅವರಿಬ್ಬರಿಗೂ ಆ ಪದಗಳು ಕೇವಲ 'ಪದ'ಗಳಾಗಿ ಉಳಿಯದೆ 'ಪದ್ಯ'ವಾಗಿದ್ದರ ಅರಿವೇ ಇರಲಿಲ್ಲ! 

೮. ನೆನಪಿಗೂ ಮರೆವಿಗೂ ಮದುವೆಯಾಗಿದ್ದನ್ನು ಅವನು ಮರೆತುಬಿಟ್ಟಿದ್ದ. ಅವಳು ನೆನಪಿಸುತ್ತಲೇ ಇದ್ದಳು! 

೯. ಬಾಂಬು ಬಾಂಬೆಂದು ಬೊಬ್ಬೆ ಹೊಡೀತಿದ್ದ ಜನರ ಮಧ್ಯೆ ಹೋಗಿ ಲೈವ್ ಕವರೇಜ್ ಮಾಡಬೇಕಿದ್ದ ಟಿವಿ9 ವರದಿಗಾರ್ತಿಯೊಬ್ಬಳಿಗೆ ತಕ್ಷಣಕ್ಕೆ ಮ್ಯಾಚಿಂಗ್ ಬ್ಲೌಸ್ ಸಿಗದಾಯಿತು!!! 

೧೦. "ಹಲೋ...ಹುಷಾರಾಗಿ ಊರು ತಲುಪಿಕೊಂಡ್ಯಾ?ನಾಯಂಡಹಳ್ಳಿ ಹತ್ರ ಮೈಸೂರ್ ರೋಡ್ ಬ್ಲಾಕ್ ಅಂತಿದ್ರು, ನಿಂಗೇನೂ ತೊಂದ್ರೆ ಆಗ್ಲಿಲ್ಲ ತಾನೆ?ಅಮ್ಮ ಹುಷಾರಾಗಿ ಬಂದ್ರ?"; "ಸ್ಸಾರಿ....ರಾಂಗ್ ನಂಬರ್" 

೧೧. ಕರಿಮಲೆಯ ಕಗ್ಗತ್ತಲಿನಲ್ಲಿ ಸುಂಯ್‍ಗುಡುವ ಕುಳಿರ್ಗಾಳಿಯಲ್ಲೇ, ಉಳಿದಿದ್ದ ಆ ಕಡೇ ಬೆಂಕಿಕಡ್ಡಿಯನ್ನು ಆಕೆ ಗೀರಿಯೇಬಿಟ್ಟಳು... 

೧೨. ಬಕ್ರೀದಿಗಾಗಿ ಬೆಂಗಳೂರಿಗೆ ಬಂದಿದ್ದೊಂಟೆಯೊಂದು ಬಿಸ್ಲೇರಿಯಿಲ್ಲದೆ ಬಾಯಾರಿ ಬಳಲಿ ಬೆಂಡಾಗಿ ಕಡೆಗೆ ಬೆನ್ನ ಮೇಲಿನ ಡುಬ್ಬದ ನೀರು ಕುಡಿದು ಸುಮ್ಮನಾಯಿತು!!!

೧೩. ಮೈತುಂಬ ಸಾಲ ಮಾಡಿಕೊಂಡಿದ್ದವನಿಗೆ ಬಂಪರ್ ಲಾಟರಿ ಹೊಡೆದು ಅಹೋರಾತ್ರಿ ಕೋಟ್ಯಾಧಿಪತಿಯಾಗಿಬಿಟ್ಟ.

೧೪. ಪ್ರಕಟಣೆ: ಹುಡುಕಿಕೊಟ್ಟವರಿಗೆ ಇಪ್ಪತ್ತೈದು ಸಾವಿರ ರೂಪಾಯಿ ನಗದು ಬಹುಮಾನ. 

೧೫. ಮೌನ ಮಾತಾದಾಗ : 
...
... ...
... ... ...
'ಆಫೀಸಿಗೆ ಹೊತ್ತಾಯ್ತು ಬೇಗೆದ್ದು ಹೊರಡ್ಬೇಕಂತೆ ಅನ್ನು ನಿಮ್ಮಪ್ಪಂಗೆ' 

೧೬. 'ಹಾಲುಂಡ ತವರು' ಸಿನಿಮಾ ನೋಡಿದವಳು ಕಣ್ಣೊರಿಸಿಕೊಳ್ಳುತ್ತಾ ತನ್ನ ಗಂಡನಿಗೆ ಫೋನಾಯಿಸಿ "ಈ ವೀಕೆಂಡ್ ನಿಮ್ಮನೆಗೆ ಹೋಗಿ ನಿಮ್ಮಪ್ಪಾಮ್ಮನ್ನ ಮಾತಾಡಿಸಿಕೊಂಡು ಬರೋಣಾ ಕಣ್ರೀ" ಅಂದ್ಲು. 

೧೭. "ರೀಟೇಲ್ ದರದಲ್ಲಿ ವ್ಹೋಲ್‍ಸೇಲ್ ಮಾರಾಟ" ಅಂತ ಅವನೆಷ್ಟು ಕೂಗಿದರೂ ಒಬ್ಬ ಗಿರಾಕಿಯೂ ಹತ್ತಿರ ಬರಲಿಲ್ಲ! 

೧೮. ಚಿಂದಿ ಚಿತ್ರಾನ್ನ.ಕಡ್ಲೆಕಾಯಿ ಒಗ್ಗರಣೆ.ಉಪ್ಪು ಸ್ವಲ್ಪ ಮುಂದಾಯ್ತು 

೧೯. ಹೊಸದಾಗಿ ತಂದ ಎಮರ್ಜೆಂಸಿ ಲ್ಯಾಂಪನ್ನು ಉಪಯೋಗಿಸುವುದು ಹೇಗೆಂದು ಕೈಪಿಡಿಯನ್ನು ಬಿಡಿಸಿ ಓದುತ್ತಿರುವಾಗಲೇ ಕರೆಂಟ್ ಹೋಗಿ ಕಾರ್ಗತ್ತಲಾವರಿಸಿತು. 

೨೦. ಅವನಂದುಕೊಂಡಂತೆ ಎಲ್ಲವೂ ಸಾಂಗವಾಗಿಯೇ ನಡೆಯಿತು. ಅವಳ ಕೊನೆಯವರೆಗೂ... 

೨೧. ಆಕೆಯಿಂದ ಪಡೆದುಕೊಂಡಿದ್ದ ಮುತ್ತುಗಳನ್ನು ಜತನವಾಗಿ ಕಾಪಾಡಿ ಈಕೆಯನ್ನು ತೊರೆಯುವ ದಿನ ಇವಳಿಗೊಂದು ಸುಂದರ ಮುತ್ತಿನಹಾರವಾಗಿಸಿ ಕೊಟ್ಟ 

೨೨. ಯಾವುದೋ ನಿರೀಕ್ಷೆಯಲ್ಲಿದ್ದವಳು ಧಿಗ್ಗನೆದ್ದು ದೇವರ ಮುಂದೊಂದು ತುಪ್ಪದ ದೀಪ ಹಚ್ಚಿಟ್ಟು, 'ದೇವ್ರೆ, ನಾನ್ ಪ್ರೆಗ್ನೆಂಟ್ ಆಗಿಲ್ದೇ ಇದ್ದಂಗ್ ನೋಡ್ಕೊಳಪ್ಪಾ' ಅಂದು ಬಚ್ಚಲುಮನೆ ಕಡೆ ನಡೆದಳು.

೨೩. ಆಸೆ : ತಿಳಿಗೊಳದಲೆಯಲಿಹ ತರಗೆಲೆಯಡಿ ತರಂಗವಾಗಬೇಕು ತಾನ್

೨೪. ಮಳೆ ನಿಂತು ಮೋಡಗಳೆಲ್ಲ ಸರಿದು 'ಸೂರ್ಯ' ಇನ್ನೇನು ಹೊರಗೆ ಇಣುಕಬೇಕೆನ್ನುವ ಹೊತ್ತಿಗಾಗಲೇ ರಾತ್ರಿಯಾಗಿತ್ತು.

೨೫. 'ಸಾಲಗೆ ದೊರವುದಿಲ್ಲ; ವರದರಾಜ ಬಾಣಾವರ; ಕನ್ನಡ ಗೊತ್ತಿಲ್ಲ'


ಸುಶೀಲ್ನ ಈ ಬ್ಲಾಗ್ ಇಲ್ಲಿ ನೋಡಬಹುದು (This blog is also at): 


No copyright infringements. Check. Due credit given. Check. Credits right at the top. Check. Link to original. Check. Okay, now I can rest in peace. There will be court case, no media madness and aal eez well.

4 comments:

  1. Thanks Susheel! You just added a new flavour to my blog - never had stories before, never had a readable Kannada blog before.

    ReplyDelete
  2. Wow, I'd never come across the 6 word story before,thanks.

    Some of your attempts are damn good, some need a good dose of JD before you read 'em ;)

    ReplyDelete