Hit Counter

3 Jun 2009

ಜನರ ಗುಂಪು

ನಮ್ಮ ಬೆಂಗಳೂರು, ಬೆಂಗಳೂರಿನ ಜನ... ಅಬ್ಬಬ್ಬ ಲೆಕ್ಕವೇ ಇಲ್ಲ!

ಅಬ್ಬ ಆಫೀಸಿಂದ ಮನೆಗೆ ಬಸ್ಸಿನಲ್ಲಿ ಬಂದೆ. ಬರೆ ೨ ಕಿ.ಮಿ... ಅಂದ್ರೆ hmm ೧೫ ನಿಮಿಷಗಳು ಅಷ್ಟೆ. ಕಂಡಕ್ಟರ್ ಬೈಗುಳ, ಪರ ವಾಹನಗಳ ಮೇಲೆ ಚಾಲಕನ ಸಿಟ್ಟು, ಹೆಂಗಸರ ಜಗಳ, ಹುಡ್ಗಿರನ್ನು ನೋಡಿ ಜಲ್ಲು ಸುರಿಸುತ ನಿಂತ ಪಡ್ಡೆ ಹುಡುಗರು... ಏನ್ ಹೇಳ್ತಿರ! ಇವೆಲ್ಲರ ಮಧ್ಯ ನಾನು ನನ್ನ ರೇಡಿಯೋದಲ್ಲಿ ಹಾಡು ಕೇಳುತ ಪ್ರಪಂಚದ ಗೋಳನ್ನು ಮರೆಯುತ ಕೂತಿದ್ದೆ. ಅಷ್ಟರಲ್ಲಿ ನೋಡಪ್ಪ ಚಾಲಕ ಅನಿರೀಕ್ಷಿತವಾಗಿ ಗಾಡಿ ನಿಲ್ಲಿಸಿದ... ಕ್ರೇಏಏಏಏಕ ಅಂತು ಬ್ರೇಕ್! ರಸ್ತೆಯಲ್ಲಿ ನಾಯಿಗಳ ಗಲಾಟೆ - ಅಯ್ಯೋ ಇದು ಬೇರೆನಾ ಅನ್ಕೊತಾ ನಾನು ಸುಮ್ಮನೆ ಕೂತೆ. ಅಷ್ಟರಲ್ಲೇ ಕಥೆ ಮುಗಿದಿದ್ರೆ ಸರಿ, ಇನ್ನು ೫ ನಿಮಿಷದಲ್ಲಿ ಗಾಡಿ ಮುಂದೆ ಹೋಗಬಹುದಿತ್ತು. ಎಲ್ಲಿ? ಪ್ರಪಂಚದಲ್ಲಿ ಎಲ್ಲ ಅಷ್ಟು ಸುಲಭವಗಿದ್ರೆ ಯಾರಿಗೆ ಹೇಳಿ ಚಿಂತೆ? ಅದೇನೋ ಹೇಳ್ತಾರಲ್ಲ, ಕಷ್ಟ ಇರೋದು ಹಗದ್ರು ಜನ ದೇವರನ್ನ ನೆನಸಿ ಕೊಳ್ಳಲಿ ಅಂತಾನೆ.

ಸರಿ ಅದಯ್ತಾ? ಮನೆಗೆ ಬಂದೆ. ಮನೆಯಲ್ಲಿ ಒಂದು ತಾರಾ ಬೇರೆ ಗುಂಪಿನ ಜನ. ಕೆಲವರಿಗೆ ಹೊರಗೆ ಕೆಲಸ ಮಡಿ ಸುಸ್ತು ಅಂದ್ರೆ, ಕೆಲವರಿಗೆ ಮನೇಲೆ ಕೆಲಸ ಮಡಿ ಸುಸ್ತು. ಒಟ್ಟಿನಲ್ಲಿ ಇಡೀ ದಿನದ ಚಿಂತೆಯೆಲ್ಲ ಒಬ್ಬರ ಮೇಲೆ ಒಬ್ಬರು ಹಾಕಿ ಕೊಂಡು, ಊಟ ಮಾಡುತ, ತರ್ಲೆ ಮಾಡುತ್ತ, ಟಿವಿ ನೋಡುತ್ತಾ, ಕೊನೆಗೂ ನಿದ್ರೆ ಸಮಯ.

ಕೆಲವೊಮ್ಮೆ ಇದೆಲ್ಲದರ ಮದ್ಯ ಉಲ್ಲಾಸ್ ಜೊತೆ ನಾನು ಹೊರಗೆ ಹೋಗ್ತೀನಿ... ನಡೆಯೋಕೆ ಅಂಥ. ಸಕ್ಕತ್ ಮಜಾ ಬರುತ್ತೆ ಅನ್ನೋದಲ್ದೆ, ನಾವಿರೋ ಸುತ್ತ ಮುತ್ತ ಜಾಗ ಸಹ ಹೇಗಿದೆ ಅಂಥ ನೋಡ್ಬೋದಲ್ಲ, ಅಲ್ವೇ?

ಮೊನ್ನೆ ಒಂದು ದಿನ rmz ಅನ್ನೋ ಕ್ಯಾಂಪಸ್ ಒಳಗೆ ಹೋಟೆಲ್-ಗೆ ಹೋಗಿದ್ವಿ... ಏನು ಜನ ಅಂತಿರ. ಬರಿ ಅಲ್ಲಿ ಕೆಲಸ ಮಾಡೋದೋ ಅತ್ವ ಜಿಮ್-ಗೆ ಬಂದವರಲ್ಲ... ಅವರಿಗಿಂತ ಜಾಸ್ತಿ ನಮ್ಮ ತರ ಹೊರಗಿಂದ ಬಂದವರೇ ಜಾಸ್ತಿ. ಸುಮ್ನೆ ಹೀಗೆ ಒಂದು ಜಾಗ ಇದೆ, ತಿನ್ನೋಕ್ಕೆ ಸುಗುತ್ತೆ ಅಂದ್ರೆ ಮನುಷ್ಯ ಹೇಗೆ ದೊಂಬಿ ತರ ಓಡಿ ಹೋಗ್ತಾನೆ ಅನ್ನೋದಕ್ಕೆ ಇದೆ ಸಾಕ್ಷಿ. ಅದ್ರು ಏನೇ ಹೇಳಿ, ಮಾನವ ದುಡಿಯೋದೆ ಹೊಟ್ಟೆ ಪಾಡಿಗೆ ಅಲ್ಲವೇ? ತಿನ್ನಲಿ ಬಿಡಿ ಅಂತಿರ? ಅಯ್ಯೋ ದೇವರೇ, ನನ್ನನ್ನ ನೋಡ್ರಿ... ೬ ತಿಂಗಳಲ್ಲಿ ೬ ಕೆಜಿ ತೂಕ ಜಾಸ್ತಿ ಆಗಿದೆ :( ಯಾವ ಬಟ್ಟೆ ಸಹ ಹಕ್ಕೊಲೋಕ್ಕೆ ಬರಲ್ಲ, ನೋಡಿದವರೆಲ್ಲೇ ಏನಮ್ಮ ಡುಮ್ಮಿ ಅಂತಾರೆ... hmmm!

ಸರಿ ಸರಿ, ಬರ್ದಿದ್ದು ಆಯಿತು... ತುಂಭ ನಿದ್ರೆ ಬರ್ತಾ ಇದೆ... ಹೋಗಿ ಮಲಗ್ತ್ಹಿನಿ... ಬೆಳಿಗ್ಗೆ ಬೇಗ ಏಳಬೇಕು. ೭ ವರೆ ಘಂಟೆ-ಗೆಯಾದರು ಆಫೀಸ್-ಗೆ ಹೋಗ್ಬೇಕು... ಸೂಸನ್ ಬರ್ರತ್ ಜೊತೆ ಚಹಾ ಕುಡಿಯೋ ಮೀಟಿಂಗ್ ಅಂತೆ ಏನೋ. ಹೋಗಬೇಕಲ್ಲ! ಸರಿ, ಮತ್ತೆ ಸಿಗೋಣ. Ta-ta. ಶುಭರಾತ್ರಿ :)

1 comment: